“ಬೆಸ್ಟ್ ಇನ್ನೋವೇಟಿವ್ ಸ್ಕೂಲ್ ಮತ್ತು ಬೆಸ್ಟ್ ಗ್ರೀನ್ ಸ್ಕೂಲ್ “

ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಭಾಪನ್ನು ಮೂಡಿಸುತ್ತಾ ಬಂದಿರುವ ಪ್ರೆಸ್ಟೀಜ್ ಇಂಟರ್ನ್ಯಾಷನಲ್ ಶಾಲೆ ಇತ್ತೀಚೆಗೆ ಇನ್ನೊಂದು ಪೃತಿಷ್ಟಿತ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಇದು ಪ್ರೆಸ್ಟೀಜ್ ಇಂಟರ್ನ್ಯಾಷನಲ್ ಶಾಲೆಗೆ “ಬೆಸ್ಟ್ ಇನ್ನೋವೇಟಿವ್ ಸ್ಕೂಲ್ ಮತ್ತು ಬೆಸ್ಟ್ ಗ್ರೀನ್ ಸ್ಕೂಲ್ ” ಪೃಶಸ್ತಿಗೆ ಸೌಲಭ್ಯವನ್ನು ಹೊಂದಿರುವ ಈ ಶಾಲೆ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಟ್ಟಿನ ಸವಲತ್ತುಗಳನ್ನು ಒದಗಿಸಿದೆ. ವಿಶಿಷ್ಟ ಶೈಲಿಯ ಹೊರಾಂಗಣ ಮತ್ತು ಒಳಾಂಗಣ ವಿನ್ಯಾಸಗಳಿಂದ ಇದು ಇತರ ವಿದ್ಯಾ ಸಂಸ್ಥೆಗಳಿಗಿಂತ ಭಿನ್ನವಾಗಿ ಎದ್ದು ನಿಂತಿದೆ. ವಿದ್ಯಾರ್ಥಿಗಳಿಗೆ ಬಾಹ್ಯ ಸವಲತ್ತುಗಳನ್ನು ಒದಗಿಸುವುದರಲ್ಲಿ ಮಾತ್ರವಲ್ಲ, ಮೌಲ್ಯಾಧಾರಿತ, ಕೌಶಲ್ಯಯುತ ಶಿಕ್ಷಣವನ್ನು ಒದಗಿಸುವುದರಲ್ಲೂ, ಇದು ಗುರುತಿಸಿಕೊಂಡಿದೆ. ಈ ಶಾಲೆ ಭವಿಷ್ಯದಲ್ಲಿ ಇನ್ನಷ್ಟು ಸಾಧನೆಯನ್ನು ಮಾಡುವ ಗುರಿಯನ್ನು ಹೊಂದಿದೆ.